College Code: P15GAP0063 | AISHE CODE: C58209

ಲಿಂಗಸಮಾನತೆಯು ದೇಶದ ಅಭಿವೃದ್ಧಿಯ ತಳಹದಿ- ಚಂದ್ರಶೇಖರ್ ಶೃಂಗೇರಿ

ಲಿಂಗಸಮಾನತೆಯು ದೇಶದ ಅಭಿವೃದ್ಧಿಯ ತಳಹದಿ- ಚಂದ್ರಶೇಖರ್ ಶೃಂಗೇರಿ
28 Feb 2026
Admin
106 Reads


ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಮನ;ಶಾಸ್ತ್ರ ವಿಭಾಗ, ಮಾನಸಾಧಾರ ಪುನರ್ವಸತಿ ಕೇಂದ್ರ ಹಾಗೂ ವಿಜಯವಾಣಿ ದಿನ ಪತ್ರಿಕೆಯ ಸಹಯೋಗದೊಂದಿಗೆ ದಿನಾಂಕ ೭.೩.೨೦೨೪ ರಂದು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಜಯವಾಣಿಯ ಶಿವಮೊಗ್ಗದ ಸಾಂಸ್ಥಿಕ ಸಂಪಾದಕರಾದ ಶ್ರೀ ಚಂದ್ರಶೇಖರ್ ಶೃಂಗೇರಿ ರವರು ಲಿಂಗ ಸಮಾನತೆಯನ್ನು ಸಾಧಿಸುವುದು ಅಭಿವೃದ್ಧಿಯ ಬಹಳ ಮುಖ್ಯ ತಳಹದಿ ಎಂದು ತಿಳಿಸಿದರು. ಲಿಂಗ ಅಸಮಾನತೆ ಎಂಬುದು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅಡೆತಡೆ. ಸಮಾನತೆಯನ್ನು ಸಾಧಿಸಲು ನಾವೆಲ್ಲರೂ ಬದ್ಧರಾಗಿರಬೇಕು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಡಯಾಗ್ನೋಸ್ಟಿಕ್‌ನ ಡಾಕ್ಟರ್ ಕೌಸ್ತುಭ ರವರು ಮಹಿಳೆ ಮತ್ತು ಆರೋಗ್ಯ ಎಂಬ ವಿಷಯದ ಕುರಿತು ಮಾಹಿತಿಯನ್ನು ನೀಡಿ ವಿದ್ಯಾರ್ಥಿನಿಯರೊಂದಿಗೆ ಸಂವಾದವನ್ನು ನಡೆಸಿದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ತಳಮಟ್ಟದಲ್ಲಿ ಸಾಧನೆಯನ್ನು ಮಾಡಿರುವ ಐವರನ್ನು ಗುರುತಿಸಿ ಸನ್ಮಾನಿಸಲಾಯಿತು. ಮಾನಸಾಧಾರದಲ್ಲಿ ೩೦ ವರ್ಷಗಳಿಗೂ ಹೆಚ್ಚು ಕಾಲ ಆರೋಗ್ಯ ಸೇವಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಜಯಮ್ಮ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿ ನಿಲಯದ ವಾರ್ಡನ್ ಶ್ರೀಮತಿ ಧನಲಕ್ಷ್ಮಿ, ಹಿರಿಯ ಪೌರ ಕಾರ್ಮಿಕ ಸಹಾಯಕಿ ಶ್ರೀಮತಿ ವೆಂಕಟಮ್ಮ, ಗೃಹ ಉದ್ಯಮಿ ಶ್ರೀಮತಿ ನಾಗಲಕ್ಷ್ಮಿ ಹಾಗೂ ಸ್ಪೀಕ್ ಫಾರ್ ಇಂಡಿಯಾ ಡಿಬೇಟ್ ಸ್ಪಧೆüðಯಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿನಿ ಸ್ಪೂರ್ತಿ ವೈ. ಹೆಚ್. ಇವರನ್ನು ಮಾನಸದ ನಿರ್ದೇಶಕರಾದ ಡಾಕ್ಟರ್ ರಜನೀ ಎ ಪೈರವರು ಸನ್ಮಾನಿಸಿದರು. ಎಲ್ಲ ಸನ್ಮಾನಿತರು ಜೀವನದಲ್ಲಿ ತಾವು ಸ್ವಾವಲಂಬಿಗಳಾಗಿ ಗೌರವದಿಂದ ಬಾಳಲು ತಮ್ಮ ಆತ್ಮಸ್ಥೈರ್ಯ ಹಾಗೂ ಕುಟುಂಬದ ಬೆಂಬಲ ಕಾರಣ ಎಂದು ತಮ್ಮ ಅನಿಸಿಕೆಯನ್ನು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ವರ್ಷದ ಘೋಷ ವಾಕ್ಯದಂತೆ ದೇಶದ ಪ್ರಗತಿಗಾಗಿ ಮಹಿಳೆಯರ ಅಭಿವೃದ್ಧಿಗೆ ಹೂಡಿಕೆ ಮಾಡುವುದು ಅಗತ್ಯ ಹಾಗೂ ಅನಿವಾರ್ಯ ಎಂದರು ಇಂತಹ ಹೂಡಿಕೆ ಮಾನಸಿಕ ಸಾಮಾಜಿಕ ಹಾಗೂ ಆರ್ಥಿಕ ಅಂಶಗಳೆಲ್ಲವನ್ನು ಒಳಗೊಂಡಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಮನ:ಶಾಸ್ತ್ರ ವಿಭಾಗದ ಡಾ.ಅರ್ಚನಾ ಭಟ್, ಮಾನಸಾಧಾರದ ಮನೋವೈದ್ಯರಾದ ಡಾ.ಪ್ರವೀಣ್, ಕಾಲೇಜಿನ ಸಮಾಜ ಕಾರ್ಯ ಮುಖ್ಯಸ್ಥರಾದ ಶ್ರೀ ಮಂಜುನಾಥಸ್ವಾಮಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು.ಬಿಂದು ಕಾರ್ಯಕ್ರಮ ನಿರೂಪಿಸಿ, ಸುಮಂತ್ ಸ್ವಾಗತಿಸಿ, ಕೀರ್ತನಾ ವಂದಿಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಲ್ಲಾ ವಿದ್ಯಾರ್ಥಿಗಳೊಂದಿಗೆ ಮಾನಸಾಧಾರದ ಮಹಿಳಾ ನಿಲಯವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅರ್ಥಪೂರ್ಣವಾಗಿತ್ತು.


Year 2026

Clear Filter
INKSPIRE
25 Feb 2026