College Code: P15GAP0063 | AISHE CODE: C58209

ಆಲೋಚನೆಗೆ ಹೊಸ ರೂಪು ಕೊಟ್ಟ ನೀನಾಸಂ ಶಿಬಿರ

ಆಲೋಚನೆಗೆ ಹೊಸ ರೂಪು ಕೊಟ್ಟ ನೀನಾಸಂ ಶಿಬಿರ
19 Oct 2026
ಹಸೇನ್. ಎಂ, ದ್ವಿತೀಯ ಬಿ. ಎ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು
435 Reads

ನೀನಾಸಮ್ ನನಗೆ ಅಪರಿಚಿತ. ನೀನಾಸಮ್ ಎಂದರೆ ಒಂದು ವಿಶೇಷ ರಂಗ ಶಿಕ್ಷಣ ಕೇಂದ್ರ ಎಂದಷ್ಟೇ ಕೇಳಿದ್ದೆ .ಆದರೇ ಒಂದೊಮ್ಮೆಯಾದರೂ ಕಾಣಬೇಕೆಂಬ ಹಂಬಲ ಮನದಲ್ಲೇ ತುಡಿಯುತ್ತಿತು. ಕೊನೆಗೂ ನಾನು  ಡಿಗ್ರಿ ಮಾಡುತ್ತಿರುವ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕಡೆಯಿಂದ ನೀನಾಸಮ್ ಶಿಬಿರದಲ್ಲಿ ಭಾಗವಹಿಸುವ   ಘಳಿಗೆ ಸಮೀಪಿಸಿತು. ನೀನಾಸಮ್ ಗೆ ಹೊರಡುವ ಒಂದು ವಾರ ಮುಂಚಿತವಾಗಿಯೇ ಕುತೂಹಲ ಶುರುವಾಯಿತು,.., ಹೊಸ ಅನುಭವ, ಹೊಸ ಜನರು, ಹೊಸದೇ ವಾತಾವರಣ ಎಂದೆಲ್ಲ ಕೌತುಕ ಕಾಡ ತೊಡಗಿತು. . ..ನಾನು ನನ್ನ ಸ್ನೇಹಿತರು ಪಯಣ ಪ್ರಾರಂಭಿಸಿ ಹೆಗ್ಗೋಡು ತಲುಪಿದೆವು. ನಮಗೆ ನೀನಾಸಮ್ ಸಮೀಪಿಸುತ್ತಿದ್ದಂತೆ ಮೊದಲು ಜಿಟಿ-ಜಿಟಿ ಎಂದು ಪ್ರಾರಂಭವಾದ ಮಳೆಯೂ ಅನಂತರ ಬೋರ್ಗರೆಯತೊಡಗಿತು.       ಆ ವೇಳೆಯಲ್ಲಿ "ಹೆಗ್ಗೋಡು" ಒಂದು ಸ್ವರ್ಗದಂತೆ ಗೋಚರಿಸಿದ್ದು ಸುಳ್ಳಲ್ಲ.

"ನೀನಾಸಮ್"  ಎಂದರೆ "ನೀಲಕಂಠೇಶ್ವರ ನಾಟ್ಯ ಸೇವಾ ಸಂಘ" ಎಂಬ ಅರ್ಥ ನೀಡುತ್ತದೆ, ಆದರೇ ನನಗೆ..., "ತಿಳಿದುಕೊಳ್ಳಲು ಬಂದಿರುವವರ ಮತ್ತು ತಿಳಿಸಿ ಕೊಡಬಲ್ಲ ಅನುಭವಸ್ಥರ  "ಸಮ್ಮಿಲನ"ವೇ "ನೀನಾಸಮ್",  ಎಂದೆನಿಸಿತು. ಏಕೆಂದರೆ ನನ್ನೋತಹ ಸುಮಾರು 50ಕ್ಕಿಂತ ಹೆಚ್ಚು ವಿವಿಧ ಸ್ಥಳಗಳ ವಿದ್ಯಾರ್ಥಿಗಳು,ಬೇರೆ ಬೇರೆ ಕ್ಷೇತ್ರದ ಸಾಹಿತ್ಯ, ಕಲೆ ಇತ್ಯಾದಿಗಳ ಆಸಕ್ತಿ ಉಳ್ಳ 50 ಕ್ಕಿಂತಲೂ ಹೆಚ್ಚು ಹಿರಿಯರು ಈ ಶಿಬಿರದಲ್ಲಿ ಭಾಗವಹಿಸುತ್ತಾರೆ... ಶಿಬಿರಾರ್ಥಿಗಳು ವಿವಿಧ ವಿಷಯ ತಜ್ಞರೊಂದಿಗೆ ಸಮಾಲೋಚಿಸುತ್ತ ಹೊಸತೊಂದು ಅನುಭವ ಜ್ಞಾನ ಪಡೆಯುತ್ತಾರೆ.

ಈಗ ಆ ನೀನಾಸಮ್ ಗೆ 75 ವರ್ಷಗಳು ತುಂಬಿದೆ ಅಂದರೆ "ಅಮೃತ ಮಹೋತ್ಸವಕ್ಕೆ"ನೀನಾಸಮ್ ಈಗ ಸಜ್ಜಾಗಿದೆ. ನೀನಾಸಮ್ ಕ್ರಿ. ಶ 1949 ರಲ್ಲಿ ಪ್ರಾರಂಭವಾಗಿ, ಕ್ರಿ. ಶ 1956 ರಲ್ಲಿ ನೋಂದಣಿ ಮಾಡಲಾಯಿತು. ಈ ಸಂಸ್ಥೆಯೂ ನೂರಾರು ಜನರ ಜೀವನ ರೂಪಿಸಿದೆ. 5 ದಿನಗಳ ಈ ಶಿಬಿರದಲ್ಲಿ ಹಲವಾರು ತಿಳಿಯದ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು.

ಮೊದಲ ದಿನದ ಭಾಷಣಕಾರರೂ ಹಾಗೂ "ಕೋಲೋನಿಯ ಟ್ರಾನ್ಸ್ಲೇಷನ್" ಎಂಬ ಪುಸ್ತಕದ ಕರ್ತೃಗಳು ಆಗಿದ್ದ "ಶ್ರೀ ಹರೀಶ್       ತ್ರಿವೇದಿ" ಅವರು ಭಾಷಾಂತರ  ಎಂದರೆ "ಒಂದು ಹೆಣ್ಣು ಹೇಗೆ ತನ್ನ ಪತಿಗೆ ನಿಷ್ಠಾವಂತರಾಗಿರುತ್ತಾಳ್ಳೊ, ಹಾಗೆ ಅನುವಾದವು(ಭಾಷಾಂತರ )ಮೂಲ ಕೃತಿಗೆ ಪೂರ್ಣ ಅರ್ಥ ನೀಡುವಂತಿರಬೇಕು. ಎಂದು ತಿಳಿಸಿದರು, ಅದು ನಿಜವೇ..?  ಸಾಹಿತ್ಯಗಳು ಎಲ್ಲಾ ಭಾಷೆಗಳಲ್ಲಿ ಬಹಳಷ್ಟು ಅರ್ಥ ನೀಡುತ್ತವೆ. ಆ ಸಾಹಿತ್ಯವನ್ನು ಜನರಿಗೆ ಹೃದಯ ಮುಟ್ಟುವ ಭಾಷೆಯಲ್ಲಿ ತಿಳಿಸಿ ಹೇಳಿದಾಗ ಮಾತ್ರ ಆ ಸಾಹಿತ್ಯಕ್ಕೆ ನಿಜವಾದ ಗೌರವ ಸಲ್ಲುತ್ತದೆ ಅಲ್ಲವೇ....?

ಹಾಗೆಯೇ  ಕನ್ನಡ ಉಪನ್ಯಾಸಕರಾದ ಕೃಷ್ಣಮೂರ್ತಿ ಹನೂರು ರವರು "ಕುಮಾರವ್ಯಾಸ" ನ ಯಾವುದೇ ಕಾವ್ಯಗಳಾದರೂ ಸರಿ ಅವುಗಳನ್ನು  ಪೂರ್ಣ ಪ್ರಮಾಣದಲ್ಲಿ ಬೇರೆ ಭಾಷೆಗಳಲ್ಲಿ ಅನುವಾದ ಮಾಡಲು ಸಾಧ್ಯವೇ ಇಲ್ಲ.ಎಂದು ಅಭಿಪ್ರಾಯ ವ್ಯಕ್ತಪಡಿಸಿದರೂ ಅವರ ಪ್ರಯತ್ನ ಮತ್ತು ಸವಾಲುಗಳನ್ನು ವಿವರಿಸಿದರು. ಆ ಸಂಜೆ ಯೇ  "ಹೃದಯದ ತೀರ್ಪು" ಎಂಬ "ಭಾನು ಮುಷ್ತಕ್" ರವರ ನಾಟಕ ನೋಡಿದೆವು, ನಿಜವಾಗಿಯೂ ನಾಟಕದ ಹೆಸರಿನಂತೆಯೇ ಹೃದಯ ಮುಟ್ಟುವಂತೆಯೇ ಇತ್ತು. ತಾಯಿಯ  ನಿಷ್ಕಲ್ಮಶ ಮನಸಸ್ಸಿಗೆ ಅದೇಷ್ಟು ನೋವು ಉಂಟಾಗುತ್ತದೆ...! ಆ ತಾಯಿಯ ಅಸಹನೆ, ಮನಸ್ಸಿನ ವೇದನೆ ಹೇಳಲು ಸಾಧ್ಯವೇ...? ಈ ಬದಿಯಲ್ಲಿ ತಾಯಿಯದು ಈ ಪರಿಸ್ಥಿತಿ ಯಾದರೆ ಈ ಬದಿ ಪತ್ನಿ.

ಪತಿಯ ಪ್ರೀತಿಗಾಗಿ ಹಂಬಲಿಸುತ್ತಿದ ಪತ್ನಿ ,ನಂತರ ಅವನ ಪ್ರೇಮದಲ್ಲಿ ಕೊರತೆ ಉಂಟಾಗುತ್ತದೆ ಎಂದು ಭಾವಿಸಿ ಉದ್ವೇಗಕ್ಕೆ ಹೋಗುವಳು. ಇವರಿಬ್ಬರನ್ನು ಸಾಂಬಾಳಿಸುವಾ ಮಗ. ಏನನ್ನು ಹೇಳಲಾರದ ಪರಿಸ್ಥಿತಿ ಅವನದ್ದು. ನಾ ಕಂಡ ಪ್ರೇಮವ ಹೇಳಲು ಆರಂಭಿಸಿದರೆ, ದ್ವೇಷದ ಬಗೆ ಹೇಗೆ ಎಂದು ಯೋಚಿಸಿದೆ.

ಹೀಗೆ ಪ್ರತಿ ದಿನವೂ ಹೊಸ ನಾಟಕಗಳ ಔತಣ. ಅದು ನಿಗೂಢ ಕಲಿಕೆಯ ಆಲಿಂಗನ ಎಂದೇ ಹೇಳಬಹುದು. ಒಬ್ಬ ಕವಿ ಎಷ್ಟು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ, ಹೇಗೆ ತಮ್ಮ ಜೀವನದ ಹಾದಿಯನ್ನು ರೂಪಿಸಿಕೊಳ್ಳುತ್ತಾರೆ  ಎಂಬುದಕ್ಕೆ "ತಮಿಳು ಕವಿ       ಜೈ ಮೋಹನ್  ಪ್ರತ್ಯಕ್ಷ ಸಾಕ್ಷಿಯಾಗಿದ್ದರು.ಕಾರಣ ಅವರು ತಮ್ಮ ಜೀವನದ 2 ವರ್ಷ ಗಳನ್ನು ಬೀದಿಬದಿಯಾ ಸಾಮಾನ್ಯ ಭಿಕ್ಷುಕನಂತೆ ಕಳೆದಿದ್ದರಂತೆ.

ಹೊಟ್ಟೆಗೆ ಒಂದು ಹೊತ್ತಿನ ಊಟಕ್ಕೂ ಅವರು ಪಟ್ಟ ಕಷ್ಟ, ನೋವು, ವೇದನೆ ಅಪಾರವಾದುದು. ಅವರು ಅಷ್ಟೆಲ್ಲ ಕ್ರೂರ ಘಟನೆ ಕಳೆದ ನಂತರವೂ ಎದೆಗುಂದದೆಯೇ ಏನಾದರೂ ಸಾಧಿಸಬೇಕು ಎಂದು ಪಣ ತೊಟ್ಟರು, ಲೇಖನಿ ಯನ್ನು ಬಳಸಿಈ ಸಮಾಜವನ್ನು ಎದುರಿಸಬೇಕೆಂದು  ಬರವಣಿಗೆಯನ್ನು ಪ್ರಾರಂಭಿಸಿದರು. ಅದರಲ್ಲಿ ಗೆದ್ದು ಈಗ " ಸಾಮಾನ್ಯ ವ್ಯಕ್ತಿ ಇಂದ ಒಬ್ಬ ದೊಡ್ಡ ಕವಿ ಯಾಗಿ " ಜಗತ್ತಿಗೆ ಪರಿಚಿತರಾಗಿದ್ದಾರೆ. ಹೀಗೆ ಅಲ್ಲವೇ ಜಗತ್ತು ನಮ್ಮನ್ನು ಕೀಳಾಗಿ ಕಂಡಾಗ ನಾವು ಏನಾದರೂ ಸಾದಿಸಲು ಸಾಧ್ಯ.   ಹಾಗೆಯೇ ಹಿರಿಯ ಗಮಕ ಪ್ರಚಾರಕಿ ಯಾದ ಶ್ರೀಮತಿ ನಿರ್ಮಲ ಮತ್ತು ಎ. ವಿ ಪ್ರಸನ್ನ ಸರ್ ಅವರು ಆದಿ ಪರ್ವದ 15 ನೇ ಭಾಗವಾದ "ದ್ರೌಪದಿಯ ಸ್ವಯಂವರ" ಸನ್ನಿವೇಶವನ್ನು ಹಾಡಿದರು. ಅದು ನನ್ನ ಕರ್ಣಗಳಿಗೆ  ಹಿತ ನೀಡುತಿತ್ತು.ಹೇಗೆ ಶ್ರೀ ಕೃಷ್ಣನ ಕೊಳಲಿನ ಸ್ವರಕ್ಕೆ ಗೋವುಗಳು ತಲೆ ದೋರುತ್ತವೆಯೋ ಹಾಗೆ ನಾನು ತಲೆದೋರುತ್ತಿದ್ದೆ. ರಾಜೇಂದ್ರ ಚೆನ್ನಿ ಸರ್ ರವರು ಕುಮಾರವ್ಯಾಸ ಒಬ್ಬರು ನವೀನ ಅಲಂಕಾರಗಳ ಪಿತಾಮಹ ಎಂದರು. ಏಕೆಂದರೆ ಕುಮಾರವ್ಯಾಸನು ಒಬ್ಬರು ಬಳಸಿದ ಅಲಂಕಾರಗಳನ್ನು ಪುನಃ ಬಳಸಲಾರ ಅವನು ಹೊಸ ಹೊಸ ಅಲಂಕಾರಗಳನ್ನು ಬಳಸುತ್ತಿದ್ದ ನಂತೆ. ಅಲ್ಲಿ ನನಗೆ ತಿಳಿದ ಹೊಸ ವಿಷಯಗಳೆಂದರೆ ಗಾದೆ ಮಾತುಗಳು ಹೇಗೆ ಅಭಿರುದ್ದಿ ಹೊಂದಿವೆ ಎಂಬುದು, ಅದಕ್ಕೆ ಉದಾಹರಣೆಯ ಸಹಿತ ತಿಳಿಸಿದರು, "ಶಿವನ ಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ" ಎಂಬ ಗಾದೆಯು ಅಭಿರುದ್ದಿ ಹೊಂದಿ, " ಶಿವನ ಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ" ಎಂದಾಗಿದೆ.

ಹಾಗೆ ಈ ಪ್ರದೇಶವನ್ನು  ಕಾಣುತ್ತಿದ್ದರೆ ಕವಿತೆ ಒಂದು ನೆನಪಿಗೆ ಬರುತ್ತಾ ಇದೆ,ಆ ಕವಿತೆಗೆ ಹೆಸರಿಡುವುದಾದರೆ ನಾನು ಈ ಹೆಸರು ಸುಚಿಸುವೆ, ಅದು ಯಾವುದೆಂದರೆ:

ನೆಮ್ಮದಿಯ ತಾಣ:-ಈಗ ಈ ಸಾಲುಗಳನ್ನು ಕೇಳಿ, ಕಡುಗತ್ತಲ್ಲ ಅರಣ್ಯ ದಲ್ಲಿ ಕಾರ್ಮೋಡವ ನೋಡುತ ನಿಂತೇ ನಾನು, ಒಂಟಿತನದ ಅನುಭವಕ್ಕೆ ಅವಕಾಶವಿಲ್ಲದೆ  ಇನ್ನು, ನನ್ನೊಂದಿಗೆ ಜಂಟಿಯಾಗಲೂ ಮುಂದಾದವು ನೊಂದ ಬಹುಪಾಲು ವೃಕ್ಷಗಳು ಹೇಳುತ್ತ  ತಮ್ಮದೇ ವಿಶಿಷ್ಟ ಕತೆಯನ್ನು, ಆಗೇ ನಿಂತು ನೋಡುವಾಗ ಅನಿಸಿತು ಮನುಷ್ಯರಿಗಿಂತ ಲೇಸಲ್ಲವೇ ಮೌನದಿಂದಲ್ಲೇ ಮಾತನಾಡುವ     ವೃಕ್ಷಗಳಿನ್ನು, ಒಮ್ಮೊಮ್ಮೆ ಅನಿಸುತ್ತದೆ  ಎಷ್ಟು ಸುಂದರ ಅಲ್ಲವೇ, ಯಾರಿಗೂ ಸಂಕೋಚದ ಅನುಭವ ಉಂಟು ಮಾಡದೇ, ತಮ್ಮೊಂದಿಗೆ ಸಮಯ ಕಳೆದ ಜೀವಿಗಳಿಗಷ್ಟೇ ಮರು ಉತ್ತರ  ಮೌನದಲ್ಲೇ ನೀಡುತ್ತ ಎಷ್ಟು ನೋಡಿದರು ಸಾಲದೇನಿಸುವ, ಸಾಕಷ್ಟು ಜೀವಿಗಳನ್ನು ತಮ್ಮತ್ತ ಆಕರ್ಷಸುವ ಅರಣ್ಯದ ಈ ವಿಶಾಲ ಪ್ರದೇಶವನ್ನು,


ಈ ಮಾತು ಸತ್ಯವಲ್ಲವೇ. ನೀನಾಸಮ್ ವರ್ಣಿಸಲು, ಬಣ್ಣಿಸಲು, ಕ್ಲಿಷ್ಟ. ಅದು ಈ ಬಾರಿಯಂತೂ ನಮ್ಮಂತ ಯುವ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿದ್ದು ತುಂಬಾ ಉಪಯುಕ್ತಕಾರಿಯಾಗಿದೆ ಎನ್ನಬಹುದು.

ಇನ್ನೂ ಹೇಳಲು ಸಾಕಷ್ಟಿದೆ ಆದರೇ ಅದು ಹೇಗೆ ವರ್ಣಿಸಲಿ ಎಂದು ತಿಳಿಯುತ್ತಿಲ್ಲ.