ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕನ್ನಡ ವಿಭಾಗವು ಅತ್ಯಂತ ಕ್ರಿಯಾಶೀಲವಾದ ವಿಭಾಗವಾಗಿದ್ದು, ಇದರ ಧ್ಯೇಯ " ಕನ್ನಡವು ಕನ್ನಡವ ಸದಾ ಕನ್ನಡ ಸುತ್ತಿರಬೇಕು" ಎಂಬುದಾಗಿದ್ದು ಅದಕ್ಕೆ ಪೂರಕವೆಂಬಂತೆ " ಸಾಹಿತ್ಯ ಸಹೃದಯ" ಎಂಬ ವೇದಿಕೆಯನ್ನು ರಚಿಸಿ ಆ ವೇದಿಕೆಯ ಮೂಲಕ ವಿದ್ಯಾರ್ಥಿಗಳಲ್ಲಿ ಭಾಷೆಯ ಮೂಲ ಉದ್ದೇಶಗಳಾದ ಆಲಿಸುವಿಕೆ, ಓದುವಿಕೆ ಮತ್ತು ಬರವಣಿಗೆಗೆ ಪೂರಕವಾದಂತಹ ಅವಕಾಶಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿರುವ ಹಿಂಜರಿಕೆ, ಸಭಾ ಕಂಪನ, ಮತ್ತು ಆಂತರಿಕ ಭಯವನ್ನು ಹೋಗಲಾಡಿಸಲು ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿಗಳೇ ಕಾರ್ಯಕ್ರಮವನ್ನು ರೂಪಿಸಿ ನಡೆಸುವಂತಹ ಅವಕಾಶಗಳನ್ನು ನಮ್ಮ ಕನ್ನಡ ವಿಭಾಗ ಮಾಡಿಕೊಟ್ಟಿದೆ. ನಮ್ಮ ವಿಭಾಗವು ಐಚ್ಚಿಕ ವಿಷಯವಾಗಿ ಕನ್ನಡ ಇಲ್ಲದಿದ್ದರೂ ಕೂಡ ಬಹಳ ಸದೃಢವಾಗಿ ತನ್ನ ಕಾರ್ಯವನ್ನು ಮಾಡುತ್ತಾ ವಿದ್ಯಾರ್ಥಿಗಳಲ್ಲಿ ನಾಡು ನುಡಿಯ ಬಗ್ಗೆ ಅಭಿಮಾನ ಕಾಳಜಿ ಮತ್ತು ಶ್ರದ್ಧೆಯನ್ನು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಿ ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೌಢಿಮೆಯನ್ನು ಮತ್ತು ಭಾಷೆಯ ಮೇಲೆ ಹಿಡಿತವನ್ನು ಸಾಧಿಸಲು ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿಕೊಟ್ಟಿದೆ. ಒಟ್ಟಾರೆಯಾಗಿ ನಮ್ಮ ಕನ್ನಡ ವಿಭಾಗವು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಂದಿನಿಂದ ಇಂದಿನವರೆಗೂ ಶ್ರಮಿಸುತ್ತಿದೆ, ಮುಂದೆಯೂ ಶ್ರಮಿಸುತ್ತದೆ.
ಪದವಿ ಶಿಕ್ಷಣದಲ್ಲಿ ಕನ್ನಡ ಭಾಷೆಗೆ ಅತ್ಯಂತ ಮಹತ್ವವಿದೆ. ಕನ್ನಡ ನಮ್ಮ ಮಾತೃಭಾಷೆಯಷ್ಟೇ ಅಲ್ಲ, ಜ್ಞಾನ, ಸಂಸ್ಕೃತಿ ಮತ್ತು ಗುರುತಿನ ಸಂಕೇತವಾಗಿದೆ. ವಿವಿಧ ವಿಷಯಗಳ ತಿಳುವಳಿಕೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು, ಅಭಿವ್ಯಕ್ತಿಶಕ್ತಿಯನ್ನು ಬೆಳೆಸಲು ಮತ್ತು ಚಿಂತನೆಗೆ ಸ್ಪಷ್ಟತೆಗೆ ಕನ್ನಡ ಸಹಾಯ ಮಾಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳು, ಉದ್ಯೋಗಾವಕಾಶಗಳು, ಆಡಳಿತಾತ್ಮಕ ವಲಯಗಳಲ್ಲಿಯೂ ಕನ್ನಡದ ಅರಿವು ಅಗತ್ಯವಾಗುತ್ತದೆ. ಕಾಲೇಜು ಮಟ್ಟದಲ್ಲಿ ಕನ್ನಡವನ್ನು ಅಧ್ಯಯನ ಮಾಡುವುದರಿಂದ ಭಾಷಾ ಕೌಶಲ್ಯ, ಸಂವಹನ ಸಾಮರ್ಥ್ಯ ಹಾಗೂ ಸಾಹಿತ್ಯ–ಸಂಸ್ಕೃತಿ ಬಗ್ಗೆ ಗೌರವ ಹೆಚ್ಚುತ್ತದೆ. ಆದ್ದರಿಂದ, ಪದವಿ ಮಟ್ಟದಲ್ಲಿ ಕನ್ನಡ ಭಾಷೆಯ ಅಧ್ಯಯನವು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಮಹತ್ವದ ಪಾತ್ರ ವಹಿಸುತ್ತದೆ.
ಸಾಹಿತ್ಯ ಸಹೃದಯ ವೇದಿಕೆಯು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕನ್ನಡ ವಿಭಾಗದ ವೇದಿಕೆಯಾಗಿದ್ದು, ಈ ವೇದಿಕೆಯು ದಿನಾಂಕ-29-06-2017 ರಂದು ತನ್ನ ಮೊದಲ ಕಾರ್ಯಕ್ರಮವನ್ನು ನಡೆಸಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾಕಾವೇರಿಮೇಡಂ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಶ್ರೀಮತಿ ವಿಜಯ ಶ್ರೀಧರ್ ರವರು ಆಗಮಿಸಿ ವಿದ್ಯಾರ್ಥಿಗಳಿಗೆ ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಲ್ಲಿ ಸಾಹಿತ್ಯಭಿರುಚಿಯನ್ನು ಮೂಡಿಸಿ, ಅವರಲ್ಲಿರುವ ಸಾಹಿತ್ಯಸಕ್ತಿಗೆ ಪೂರಕವಾದ ವೇದಿಕೆಯನ್ನು ಒದಗಿಸಿ ಅವರಲ್ಲಿರುವ ಸಭಾಕಂಪನವನ್ನು ಹೋಗಲಾಡಿಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ. ಈ ವೇದಿಕೆಯನ್ನು ಅಂದಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಸಂತೋಷ್ ಕುಮಾರ್ ರವರು ಬಹಳ ಆಸಕ್ತಿವಹಿಸಿ ಸ್ಥಾಪಿಸಿದರು. ಪ್ರತಿ ತಿಂಗಳು ಮೂರನೇ ಮಂಗಳವಾರದಂದು ಈ ಕಾರ್ಯಕ್ರಮದ ಚಟುವಟಿಕೆಗಳು ನಡೆಯುತ್ತವೆ. ಪ್ರಸ್ತುತ ಇದರ ನೇತೃತ್ವವನ್ನು ಕನ್ನಡ ವಿಭಾಗದ ಮುಖ್ಯಸ್ಥ ಶ್ರೀ ಮೋಹನ್ ಕುಮಾರ್ ವಹಿಸುತ್ತಿದ್ದಾರೆ. ಕನ್ನಡ ವಿಭಾಗದ ಉಪನ್ಯಾಸಕರು ಶ್ರೀಮತಿ ಕವಿತ ಸುಧೀಂದ್ರ ಹಾಗೂ ಡಾ. ಮಧು. ಟಿ ಇವರ ಸಹಕಾರದೊಂದಿಗೆ ವೇದಿಕೆ ಮುನ್ನಡೆಯುತ್ತಿದೆ.
HOD, Department of Kannada
Jnana Patha Campus. 60 Feet Road, Kalyana Nagara, Sagara Road, Malligenahalli, Shivamogga-577205
© 2026 KAPMI | Powered by Webschedio