ಸಾಹಿತ್ಯ ಸಹೃದಯ ವೇದಿಕೆ ನಮ್ಮ ಕಾಲೇಜಿನಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಸೃಜನಶೀಲತೆಯ ಚೇತನ ವೇದಿಕೆಯಾಗಿದೆ. ಭಾಷೆ ಮತ್ತು ಸಾಹಿತ್ಯವನ್ನು ಪ್ರೀತಿಸುವ, ಓದು ಮತ್ತು ಬರಹದ ಆಸಕ್ತಿಯನ್ನು ಬೆಳೆಸುವ ವಿದ್ಯಾರ್ಥಿಗಳಿಗೆ ಈ ವೇದಿಕೆ ಪ್ರೇರಣೆಯ ಸೂರ್ಯವಾಗಿದೆ. ಕಾವ್ಯಪಠಣ, ಕಥಾವಾಚನ, ವಾಗ್ವಾದ, ಪುಸ್ತಕ ವಿಮರ್ಶೆ, ಲೇಖಕರೊಂದಿಗೆ ಸಂವಾದ, ಸಾಹಿತ್ಯ ಚಟುವಟಿಕೆಗಳು ಮುಂತಾದ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಭಾಷಾ ಕೌಶಲ್ಯ, ಅಭಿವ್ಯಕ್ತಿ ಮತ್ತು ಕಅಲ್ಲದೆ ಧಿಸುತ್ತದೆ. ಕನ್ನಡ ಸಾಹಿತ್ಯ ಸಮೃದ್ಧ ಪರಂಪರೆಯನ್ನು ಪರಿಚಯಿಸುವುದಷ್ಟೇ ಅಲ್ಲದೆ , ನವಚಿಂತನೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವುದು ಈ ವೇದಿಕೆಯ ಮುಖ್ಯ ಗುರಿಯಾಗಿದೆ.
ಸಾಹಿತ್ಯ ಸಹೃದಯ ವೇದಿಕೆಯು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕನ್ನಡ ವಿಭಾಗದ ವೇದಿಕೆಯಾಗಿದ್ದು, ಈ ವೇದಿಕೆಯು ದಿನಾಂಕ-29-06-2017 ರಂದು ತನ್ನ ಮೊದಲ ಕಾರ್ಯಕ್ರಮವನ್ನು ನಡೆಸಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾಕಾವೇರಿಮೇಡಂ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಶ್ರೀಮತಿ ವಿಜಯ ಶ್ರೀಧರ್ ರವರು ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇದಿಕೆಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಸಾಹಿತ್ಯಭಿರುಚಿಯನ್ನು ಮೂಡಿಸಿ, ಅವರಲ್ಲಿರುವ ಸಾಹಿತ್ಯಸಕ್ತಿಗೆ ಪೂರಕವಾದ ವೇದಿಕೆಯನ್ನು ಒದಗಿಸಿ ಅವರಲ್ಲಿರುವ ಸಭಾಕಂಪನವನ್ನು ಹೋಗಲಾಡಿಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ.
ಈ ವೇದಿಕೆಯನ್ನು ಅಂದಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಸಂತೋಷ್ ಕುಮಾರ್ ರವರು ಬಹಳ ಆಸಕ್ತಿವಹಿಸಿ ಸ್ಥಾಪಿಸಿದರು. ಪ್ರತಿ ತಿಂಗಳು ಮೂರನೇ ಮಂಗಳವಾರದಂದು ಈ ಕಾರ್ಯಕ್ರಮದ ಚಟುವಟಿಕೆಗಳು ನಡೆಯುತ್ತವೆ. ಪ್ರಸ್ತುತ ಇದರ ನೇತೃತ್ವವನ್ನು ಕನ್ನಡ ವಿಭಾಗದ ಮುಖ್ಯಸ್ಥ ಶ್ರೀ ಮೋಹನ್ ಕುಮಾರ್ ವಹಿಸುತ್ತಿದ್ದಾರೆ. ಕನ್ನಡ ವಿಭಾಗದ ಉಪನ್ಯಾಸಕರು ಶ್ರೀಮತಿ ಕವಿತ ಸುಧೀಂದ್ರ ಹಾಗೂ ಡಾ. ಮಧು. ಟಿ ಇವರ ಸಹಕಾರದೊಂದಿಗೆ ವೇದಿಕೆ ಮುನ್ನಡೆಯುತ್ತಿದೆ.
| ಹೆಸರು | ಹುದ್ದೆ | ಪದವಿ |
|---|---|---|
| ಡಾ. ಸಂಧ್ಯಾ ಕಾವೇರಿ ಕೆ | ಪ್ರಾಚಾರ್ಯರು | ಅಧ್ಯಕ್ಷರು |
| ಮೋಹನ್ ಕುಮಾರ್. ಆರ್ | ಮುಖ್ಯಸ್ಥರು, ಕನ್ನಡ ವಿಭಾಗ | ಸಂಚಾಲಕರು |
| ಕವಿತ. ಆರ್ | ಉಪನ್ಯಾಸಕರು, ಕನ್ನಡ ವಿಭಾಗ | ಸಹ ಸಂಚಾಲಕರು |
| ಡಾ. ಮಧು. ಟಿ | ಉಪನ್ಯಾಸಕರು, ಕನ್ನಡ ವಿಭಾಗ | ಸಹ ಸಂಚಾಲಕರು |
| ಕವನ. ಕೆ. ಒ | ತೃತೀಯ ಬಿ. ಎ | ಸದಸ್ಯರು |
| ಸಂಜನ. ಎಸ್. ಜಿ | ತೃತೀಯ ಬಿ. ಎ | ಸದಸ್ಯರು |
| ಹಸೇನ್. ಎಂ | ಪ್ರಥಮ ಬಿ. ಎ | ಸದಸ್ಯರು |
| ದೀಪ್ತಿ. ವೈ. ಸಿ | ಪ್ರಥಮ ಬಿ. ಎ | ಸದಸ್ಯರು |
| ಸ್ಫೂರ್ತಿ. ಎನ್. ಎಂ | ಪ್ರಥಮ ಬಿ. ಎಸ್ಸಿ | ಸದಸ್ಯರು |
© 2026 KAPMI | Powered by Webschedio