College Code: P15GAP0063 | AISHE CODE: C58209

ಪುಸ್ತಕದ ಹಾಳೆಗಳಲ್ಲಿ ಮಾತ್ರ ನನ್ನವಳು

ಪುಸ್ತಕದ ಹಾಳೆಗಳಲ್ಲಿ ಮಾತ್ರ ನನ್ನವಳು
13 Mar 2026
ಮಂಜು.ಆರ್.ಪಿ. , ತೃತೀಯ ಬಿ.ಎ
523 Reads

 ಮಲೆನಾಡ ಹೆಣ್ಣಿವಳು,

 ಎತ್ತ ನೋಡಿದರು ಹಸಿರು ಹಾಸಿರುವ ಊರಿನವಳು.


ಮಲೆನಾಡಲ್ಲಿ ಚಿಗುರುವ ಹಸಿರಿನ ಹಾಗೆ 

ಇವಳ ಕಣ್ಣ ರೆಪ್ಪೆಗಳು,


ಬೆಳಗಿನ ಜಾವಾ ಮೂಡುವ ಸರ‍್ಯನ ಕಿರಣಗಳಿಗೆ 

ಅರಳುವ ಹೂವುಗಳಂತೆ ಇವಳು.


ಮಲೆನಾಡಿನಲಿ ಎತ್ತ ಕಣ್ಣುಹರಿಸಿದರು

ಮರದ ರೆಂಬೆ-ಕೊಂಬೆ ಹಾಗೆ ಇವಳು,


ಹೇಳಬೇಕೆಂಬ ಎಷ್ಟೋ ವಿಷಯಗಳನ್ನು ಇವಳೊಂದಿಗೆ

ಹಂಚಿಕೊಳಲಾಗದೆ!

ಕೆಲವೊಮ್ಮೆ ಪ್ರಕೃತಿಯೊಂದಿಗೆ ಒಬ್ಬಂಟಿಗನಾಗಿ ನೆನೆಯುತ್ತೇನೆ.


ಹೇಳದೆ ಇರುವ ಒಂದು ಪ್ರೀತಿಯನು

ಪ್ರಕೃತಿಗೆ ಹೋಲಿಸಿದಾಗ;


 ಆ ಕ್ಷಣಕ್ಕೆ ಮಾತ್ರ ಹಗುರವೆನಿಸುವ ಮನಸು ಮತ್ತೆ ಅವಳನೆ ಪರಿತಪಿಸುತ್ತದೆ.


ಆದರೆ ನಾನು ಅದನ್ನು ಪ್ರೀತಿ ಎಂದು ಹೇಳುತಿದ್ದೇನೆ.

ಅದು ಪ್ರೀತಿನೋ!

ಅಥವಾ ಕಾಳಜಿನೋ? ಎಂದು ಇನ್ನು ಅರಿವಾಗಿಲ್ಲ...