College Code: P15GAP0063 | AISHE CODE: C58209

ಬದಲಾಗುವ ನಾವು ನವ ಭಾರತಕ್ಕಾಗಿ

ಬದಲಾಗುವ ನಾವು ನವ ಭಾರತಕ್ಕಾಗಿ
13 Mar 2026
Admin
63 Reads

ಧರ್ಮ ಧ್ವಜವನ್ನು ಹಾರಿಸುವ ಬದಲು,

ರಾಷ್ಟ್ರ ಧ್ವಜವನ್ನು ಹಾರಿಸಿ ನೋಡು,

ದೇಶ ಬದಲಾದಿತು.

ಮಕ್ಕಳ ಕೈಯಲ್ಲಿ ಚಾಕು, ಚೂರಿ, ಬಂದೂಕು ನೀಡುವ ಬದಲು

ಪೆನ್ನು, ಪುಸ್ತಕ, ವಾದ್ಯಗಳನ್ನು ಕೊಟ್ಟು ನೋಡು,

ಹೊಸ ಲೋಕವೇ ಸೃಷ್ಟಿಯಾದೀತು.

ನಾವೆಲ್ಲ ಒಂದು ಎನ್ನುವ ಮೊದಲು,

ಆ ಒಂದರ ಒಳಗೆ ಹಲವುಗಳಿವೆ ಎಂಬುದನ್ನು ಕಲಿಸು,

ಆ ಒಂದರ ಅರ್ಥ ತಿಳಿದಿತು..

ಸಮರ ಅಭ್ಯಾಸ ಮಾಡಿಸುವ ಬದಲು,

ಸಾಮರಸ್ಯದಲ್ಲಿ ಬದುಕುವುದನ್ನು ಕಲಿಸು.

ಬಟ್ಟೆಗಾಗಿ ಕಿತ್ತಾಡುವ ಬದಲು,

ಹೊಟ್ಟೆಗಾಗಿ ದುಡಿಯುವುದನ್ನು ತಿಳಿಸು.

ದೇಶದ ಆಸ್ತಿಗೆ ಬೆಂಕಿ ಹಚ್ಚಿ, ಕಲ್ಲು ತೂರುವ ಮೊದಲು,

ಅವು ನಮ್ಮ ಆಸ್ತಿ ಎಂಬ ಪ್ರಜ್ಞೆಯ ಬೆಳೆಸು.

ಧರ್ಮ ಗ್ರಂಥಗಳನ್ನು ಬೋಧಿಸುವ ಮೊದಲು

ಅದರ ಅಂತರಾಳದಲ್ಲಿರುವ ಮಾನವೀಯತೆ ಎಂಬ ಮಂತ್ರವನ್ನು ಕಲಿಸು,

ಮತ್ತೊಬ್ಬನ ರಕ್ತ ಹರಿಸಿ ಕ್ರಾಂತಿಗೆ ನಾಂದಿ ಹಾಕುವ ಮೊದಲು,

ರಕ್ತ ಕೊಟ್ಟು ಜೀವ ಉಳಿಸಿ ಶಾಂತಿ ಕಾಪಾಡುವುದನ್ನು ತಿಳಿಸು.

ಮಾನವನಾಗಿ ಹುಟ್ಟಿದೀಯಾ ಮನುಷ್ಯನಾಗಿ ಬದುಕುವುದನ್ನು ಕಲಿಸು.