ನಿನ್ನೊಲವ ಹಾದಿಯಲಿ
ನಾನೆಂದೂ ಅಪರಿಚಿತಳೆ
ಹಿಂತಿರುಗಿದಾಗಲ್ಲೆಲ್ಲ
ಮುಂದೊಡುವೆ;
ಮುಂದೆ ದೃಷ್ಟಿ ನೆಟ್ಟಾಗ
ಮತ್ತೆ ಹಿಂದೆಯೇ ಬರುವೆ.
ಜೊತೆ ನಡೆಯಲು
ನಾವೇನು ಪ್ರೇಮಿಗಳಲ್ಲ,
ಆದರೂ ಕೊಡಬಯಸುವೆ
ಒಂದೊಲವ ಉಡುಗೊರೆಯನು.
ತಂದಿರುವೆ ಜಗವ ಸುತ್ತಿ
ಎಂದಿಗೂ ಬಾಡದ ಹೂವೊಂದನು.
ಮಂಡಿಯೂರಿ ಕೊಡುವ ಆಸೆ ಏನಿಲ್ಲ.
ಮೌನದಿ ಸ್ವೀಕರಿಸಿ ಎದೆಗವುಚಿದರೆ ಸಾಕು;
ಈ ಬೀಸುವ ತಂಗಾಳಿಯಲಿ
ಮುತ್ತನೊಂದು ಕೊಟ್ಟರೆ ಸಾಕು
ನನಗೇನಲ್ಲ...
ನಾ ನೀಡಿದ ಉಡುಗೊರೆಗೆ ಮಾತ್ರ !