College Code: P15GAP0063 | AISHE CODE: C58209

KAPMC

Event Details

04 May 2026 - 04 May 2026
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿಗೆ ವಿಶ್ವವಿದ್ಯಾಲಯ ರ್ಯಾಂಕ್ ಗೌರವ

ಶಿವಮೊಗ್ಗದ ಮಾನಸ ಟ್ರಸ್ಟ್ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕು. ಭೂಮಿಕ ಎಲ್. ರವರಿಗೆ ೨೦೨೩-೨೪ ನೇ ಸಾಲಿನ ಸ್ನಾತಕೋತ್ತರ ಮನಃಶಾಸ್ತ್ರ (MSc. Psychology) ಅಧ್ಯಯನ ವಿಭಾಗದಲ್ಲಿ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಪ್ರಥಮ ರ್ಯಾಂಕ್ ಹಾಗು ಕು. ಹರ್ಷಿತ ವೈ.ಎಸ್. ಇವರಿಗೆ ದ್ವಿತೀಯ ರ್ಯಾಂಕ್ ಲಭ್ಯವಾಗಿದೆ. ಇದೇ ಕಾಲೇಜಿನ ಕು ಪ್ರೀತಿ ಡಿ. ಎಂಬ BSW  ವಿದ್ಯಾರ್ಥಿನಿಗೆ ಇದೇ ಸಾಲಿನ ನಾಲ್ಕನೇ ರ್ಯಾಂಕ್ ಹಂಚಿಕೆಯಾಗಿದೆ.

ಕುವೆಂಪು ವಿಶ್ವವಿದ್ಯಾಲಯದ ೩೫ನೇ ಘಟಿಕೋತ್ಸವದಲ್ಲಿ ಈ ವಿದ್ಯಾರ್ಥಿನಿಯರು ಪ್ರಶಸ್ತಿ ಪತ್ರವನ್ನು ಪಡೆಯಲಿದ್ದಾರೆ. ಮಾನಸ ಟ್ರಸ್ಟ್ನ ನಿರ್ದೇಶಕಿ ಡಾ ರಜನಿ ಎ ಪೈರವರು, ಶೈಕ್ಷಣಿಕ ನಿರ್ದೇಶಕರಾದ ಡಾ ಪ್ರೀತಿ ವಿ ಶಾನ್‌ಭಾಗ್, ಡಾ ವಾಮನ್ ಎಂ. ಶಾನ್‌ಭಾಗ್ ಹಾಗೂ ಡಾ. ರಾಜೇಂದ್ರ ಚೆನ್ನಿರವರು ಈ ಮೂವರು ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು. ಪ್ರೊ. ರಾಮಚಂದ್ರ ಬಾಳಿಗ, ಕಾಲೇಜಿನ ಆಡಳಿತಾಧಿಕಾರಿಗಳು, ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಅರ್ಚನಾ ಭಟ್ ಕೆ ಹಾಗೂ ಅಧ್ಯಾಪಕರೆಲ್ಲರೂ ವಿದ್ಯಾರ್ಥಿನಿಯರ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಧ್ಯಾಕಾವೇರಿಯವರು ೩೫ನೇ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಮನಃಶಾಸ್ತ್ರದಲ್ಲಿ ಪ್ರಥಮ ರ್ಯಾಂಕ್ ಪಡೆದ ಕು. ಭೂಮಿಕ ಎಲ್. ಹಾಗೂ ದ್ವಿತೀಯ ರ್ಯಾಂಕ್ ಪಡೆದ ಕು. ಹರ್ಷಿತ ವೈ.ಎಸ್. ಇಬ್ಬರೂ ಹಾಗೂ BSW ಪದವಿಯಲ್ಲಿ ಕು ಪ್ರೀತಿ ಡಿ. ಇವರು ವಿಶ್ವವಿದ್ಯಾಲಯದ ಘಟಿಕೋತ್ಸವ ವೇದಿಕೆಯಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಸಂಸ್ಥೆಗೆ ಹೆಮ್ಮೆಯನ್ನು ತಂದಿದೆ ಎಂದರು. ಸದರಿ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ಅಭಿನಂದಿಸಿ ಶುಭ ಹಾರೈಸಿದರು. ರ್ಯಾಂಕ್ ಪಡೆದ ವಿದ್ಯಾರ್ಥಿನಿಯರು ತಾವುಗಳು ರ್ಯಾಂಕ್ ಪಡೆದಿರುವುದಕ್ಕೆ ತನ್ನ ತಂದೆ-ತಾಯಿಯರ ಬೆಂಬಲ ಹಾಗೂ ಅಧ್ಯಾಪಕರ ಮಾರ್ಗದರ್ಶನ ಕಾರಣ ಎಂದು ತಿಳಿಸಿದರು. ಸೈಕಾಲಜಿಸ್ಟ್ ಆಗುವ ಕನಸನ್ನು ತಾನು ಪ್ರೌಢಶಾಲಾ ವಿದ್ಯಾರ್ಥಿನಿಯಾಗಿದ್ದಾಗಲೇ ಕಂಡಿದ್ದೆ. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾನಸ ಸಂಸ್ಥೆಯ ಮೂಲಕ ದೊರಕುವ ಕ್ಲಿನಿಕಲ್ ಟ್ರೆೈನಿಂಗ್ ಸಂಶೋಧನಾ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಭೂಮಿಕ ಎಲ್ ತಿಳಿಸಿದರು. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಪ್ರಾರಂಭದಿಂದಲೂ ವಿಶ್ವವಿದ್ಯಾಲಯ ಮಟ್ಟದ ರ್ಯಾಂಕ್ ‌ಗಳನ್ನು ಗಳಿಸುತ್ತಿರುವುದು ಕಾಲೇಜಿನ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಒಂದು ಸಾಕ್ಷಿ ಎನ್ನಬಹುದಾಗಿದೆ.