College Code: P15GAP0063 | AISHE CODE: C58209

KAPMC

Event Details

11 Feb 2026 - 11 Feb 2026
ಸಾಹಿತ್ಯ ಸಹೃದಯ- ಕರ್ವಾಲೊ ಕಾದಂಬರಿ ವಿಶ್ಲೇಷಣೆ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಇಂದು ಸಾಹಿತ್ಯ ಸಹೃದಯ ವಿದ್ಯಾರ್ಥಿ ಓದುಗರ ವೇದಿಕೆ ವತಿಯಿಂದ ವಿದ್ಯಾರ್ಥಿಗಳಿಂದ ಸಾಹಿತ್ಯ ಓದು ಮತ್ತು ಇತರ ಸಾಹಿತ್ಯ ಚಟುವಟಿಕೆಗಳ ಪ್ರಸ್ತುತಿಯನ್ನು ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಎಸ್ ಬಿ ಸುಬ್ರಹ್ಮಣ್ಯ, ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ಸವಳಂಗ ಇವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಮನುಷ್ಯನಲ್ಲಿ ಪ್ರಬುದ್ಧತೆ ಹೆಚ್ಚಾಗಬೇಕಾದರೆ ಸಾಹಿತ್ಯದ ಓದು ಅನಿವಾರ್ಯ ಎಂದು ಹೇಳುತ್ತಾ ನಾವು ಹೆಚ್ಚು ಓದಿಕೊಂಡಷ್ಟು ನಮ್ಮಲ್ಲಿ ಅಶಾಶ್ವತತೆಯ ಜಾಗೃತವಾಗುತ್ತದೆ ಎಂಬುದನ್ನು ತಿಳಿಸಿದರು, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಮೋಹನ್ ಕುಮಾರ್ ರವರು ಆಡಿದರು, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮಧು. ಟಿ ಉಪಸ್ಥಿತರಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಐ ಕ್ಯೂ ಎ ಸಿ ಸಂಯೋಜಕರಾದ ಡಾ.ಅರ್ಚನಾ ಕೆ ಭಟ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅಧ್ಯಕ್ಷೀಯ ನುಡಿಗಳಲ್ಲಿ ಈ ರೀತಿಯ ಸಾಹಿತ್ಯದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವುದರಿಂದ ಅವರ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಅವರ ಯೋಚನೆ ಮಟ್ಟ ಉನ್ನತವಾಗುತ್ತದೆ ಎಂದು ತಿಳಿಸಿದರು, ಕಾರ್ಯಕ್ರಮವನ್ನು ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಸುರಭಿ ನಿರೂಪಿಸಿದರು, ದ್ವಿತೀಯ ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿನಿ ಪವಿತ್ರ ಎಲ್ಲರನ್ನು ಸ್ವಾಗತಿಸಿದರು, ವಿದ್ಯಾರ್ಥಿಗಳಿಂದ ಸಾಹಿತ್ಯ ಆಧಾರಿತ ಚಟುವಟಿಕೆಗಳು ನೆರವೇರಿದವು ಪ್ರಥಮ ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿ ಸಂಜನಾ ಎಲ್ಲರನ್ನು ವಂದಿಸಿದರು.