ಜಾಗೃತಿ ಯುವ ಶಿಬಿರಕ್ಕೆ ಹೋಗಲು ನಮಗೆ ಸ್ಪೂರ್ತಿಯಾಗಿದ್ದು ಸಂಧ್ಯಾ ಕಾವೇರಿ ಮೇಡಂ .
ನಮ್ಮ ಕಾಲೇಜಿನಿಂದ ಆರು ಜನ ಯುವತಿಯರು ಈ ಶಿಬಿರಕ್ಕೆ ಬಹು ಉತ್ಸಾಹದಿಂದ ರಾತ್ರಿ 9.30 ಹೊನ್ನಾವರ ಬಸ್ಸಿಂದ ಕವಲಕ್ಕಿ ಗ್ರಾಮಕೇ ತಲುಪಿದೆವು ಅಲ್ಲಿಂದ ನಮ್ಮ ಶಿಬಿರದ ದಿನ ಪ್ರಾರಂಭವಾಯಿತು. ಈ ಶಿಬಿರವು ಕುತೂಹಲದಿಂದ ಕೂಡಿತ್ತು.
ಪ್ರಜ್ಞಾ ಜಾಗೃತಿ ಯುವ ಶಿಬಿರ ಒಂದು ಅದ್ಭುತವಾದ ಶಿಬಿರವಾಗಿತ್ತು.ಈಗ ಚಿಗುರು ಹೊಡೆದು ಬೆಳೆಯುತ್ತಿರುವ ಎಲ್ಲಾ ಯುವಕ/ಯುವತಿಯರಿಗೆ ಈ ಶಿಬಿರವು ಹೊಸ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಕಲ್ಪಿಸಿ ಕೊಡುತ್ತದೆ.
ಡಾ. ಎಚ್. ಎಸ್. ಅನುಪಮಾ ಮೇಡಂ ನಿಜಕ್ಕೂ ದೊಡ್ಡದದ ಆಲದ ಮರ ನಮ್ಮಂತ ಹಲವಾರು ಯುವತಿ ಯುವಕರಿಗೆ ನೆರಳು ನೀಡುತ್ತ ದೈರ್ಯ ತುಂಬುತ್ತ ತಮ್ಮಲ್ಲಿರುವ ಜ್ಞಾನವನ್ನು ಹಂಚುತ್ತ ಇದ್ದಾರೆ.ಇವರಿಂದ ಮುಂದೆ ಬರುವ ಯುವ ಪೀಳಿಗೆ, ಸಾಧನೆಯನ್ನು ಮಾಡಲು ಪ್ರೇರಣೆಯಾಗಿದ್ದಾರೆ.
• ಪ್ಲಾಸ್ಟಿಕ್ ಇಂದ ಆಗುವ
ಪರಿಣಾಮಗಳು
•ಇದರಿಂದ ಮೂಖ ಪ್ರಾಣಿಗಳು
ಅನುಭವಿಸುತ್ತಿರುವ ಕಷ್ಟಗಳು
•ಪ್ಲಾಸ್ಟಿಕ್ ಕಸ ವಿಲೇವಾರಿ
•ಪ್ಲಾಸ್ಟಿಕ್ ವಿಲೇವಾರಿ ವಿಧಾನಗಳು
•ಪ್ಲಾಸ್ಟಿಕ್ ಗೆ ಪರ್ಯಾಯ
•ಪ್ಲಾಸ್ಟಿಕ್ ನಿಷೇಧ
ಪ್ಲಾಸ್ಟಿಕ್ ನ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಸಾರ್ವಜನಿಕರಿಗೆ ಅದ್ಭುತವಾಗಿ ತಿಳಿಸುತ್ತಿದ್ದಾರೆ.ಜನರಲ್ಲಿ ಪ್ಲಾಸ್ಟಿಕ್ ನ ಬಗ್ಗೆ ಸಾಮಾನ್ಯವಾದ ಜ್ಞಾನವನ್ನು ತಮ್ಮ ಸ್ವಂತ ಶ್ರಮದಿಂದ ಹಾಗೂ ಒಂದು ಗುಂಪನ್ನು ಸೃಷ್ಟಿಸಿ ತಮ್ಮ ಗ್ರಾಮದ ಕಸವನ್ನು ಸ್ವಚ್ಛಗೊಳಿಸುತ್ತಿದ್ದಾರೆ.
ಈ ಶಿಬಿರಕ್ಕೆ ಹೋದ ನಾವು ಎಲ್ಲ ಯುವತಿಯರು ಬಹಳ ವಿಷಯಗಳನ್ನು ತಿಳಿದುಕೊಂಡು ನಾವುಗಳು ಸಹ ಪ್ಲಾಸ್ಟಿಕ್ ಅನ್ನು ಆದಷ್ಟು ಕಡಿಮೆ ಬಳಸಬೇಕೆಂದು ನಿರ್ಧರಿಸಿದ್ದೇವೆ ..
ಇಷ್ಟೇ ಅಲ್ಲದೆ ಅವರು ಪ್ರಸ್ತುತ ರಾಜಕೀಯ ಆಡಳಿತದ ಬಗ್ಗೆ ಅತ್ಯದ್ಭುತವಾಗಿ ತಿಳಿಸಿಕೊಟ್ಟರು ಹಾಗೂ ಕವಲಕ್ಕಿ ಗ್ರಾಮದಲ್ಲಿರುವ ಮಿರ್ಜಾ ಫೋರ್ಟ್ನನ ಇತಿಹಾಸವನ್ನು ಸಂಪೂರ್ಣವಾಗಿ ವಿವರಣೆ ನೀಡಿದರು .ನಮ್ಮ ಸುತ್ತಮುತ್ತಲಿರುವ ಪರಿಸರವನ್ನು ಹೇಗೆ ಸೂಕ್ಷ್ಮವಾಗಿ ನೋಡಬೇಕೆಂದು ತಿಳಿಸಿದರು ,ಪ್ರತಿಯೊಬ್ಬರ ಕಷ್ಟ ಸಮಸ್ಯೆಗಳಿಗೆ ಪರಿಹಾರ ಹೇಳಿ ಹೇಗೆ ಹೆಣ್ಣು ಮಕ್ಕಳು ಧೈರ್ಯವಾಗಿ ಇರಬೇಕೆಂದು ತಿಳಿಸಿದರು ಪ್ರತಿಯೊಂದು ವಿಷಯದ ಬಗ್ಗೆ ಸೂಕ್ಷ್ಮವಾಗಿ ಎಳೆಎಳೆಯಾಗಿ ಬಿಡಿಸಿ ಅರ್ಥೈಸಿದರು, ಪ್ರಜ್ಞಾ ಜಾಗೃತಿ ಶಿಬಿರವು ಎಂದೆಂದಿಗೂ ಮರೆಯಲಾಗದ ಒಂದು ಅದ್ಭುತವಾದ ಶಿಬಿರವಾಗಿದೆ. ಇಂತಹ ಶಿಬಿರವನ್ನು ಕಲ್ಪಿಸಿಕೊಟ್ಟ ಡಾಕ್ಟರ್ ಎಚ್ಎಸ್ ಅನುಪಮಾ ಮೇಡಂ ರವರಿಗೆ ಹೃತ್ಪೂರ್ವ ಧನ್ಯವಾದಗಳು 💐❤
ರಹೀಮಾ. ಎಸ್
ತೃತೀಯ ವರ್ಷ ಬಿಎ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜ್, ಶಿವಮೊಗ್ಗ