ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಮಾನಸ ಟ್ರಸ್ಟ್, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಶಿವಮೊಗ್ಗ , ಕಾಲೇಜಿನ ಸಮಾಜ ಕಾರ್ಯ ವಿಭಾಗ, ಯುವ ರೆಡ್ ಕ್ರಾಸ್ ಘಟಕ ಹಾಗೂ ಐ ಕ್ಯೂ ಎ ಸಿ ವಿಭಾಗ ದ ಸಹಯೋಗದಲ್ಲಿ ದಿನಾಂಕ 24/04/2025 ರಂದು ಮಹಿಳೆಯರಿಗಾಗಿ ” ಸಖಿ – ಆರೋಗ್ಯ ” – ಹೆಣ್ಣು ಮಕ್ಕಳ ಆರೋಗ್ಯ ದ ಬಗ್ಗೆ ಒಂದು ದಿನದ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಇಂದಿನ ಸನ್ನಿವೇಶದಲ್ಲಿ ಮಹಿಳೆಯರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಅದರಲ್ಲಿಯೂ ಋತು ಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿ ದ್ದಾಗ ಬಹುಪಾಲು ಮಹಿಳೆಯರು ಯಾರೊಂದಿಗೂ ಇದರ ಬಗ್ಗೆ ಚರ್ಚಿಸಲು ಹಿಂಜರಿಯುತ್ತಾರೆ.
ನಾವು ನಮ್ಮ ದೇಹವನ್ನು ಗೌರವಿಸಬೇಕು, ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ಏಕೆ ಸಂಭವಿಸುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ತಿಳುವಳಿಕೆಯ ಕೊರತೆಯಿದ್ದರೆ ಕೆಲವು ಅಭ್ಯಾಸಗಳನ್ನು ಕುರುಡಾಗಿ ಅನುಸರಿಸುತ್ತೇವೆ ಮತ್ತು ಆ ತಪ್ಪು ಕಲ್ಪನೆಗಳನ್ನು ನಂಬುತ್ತೇವೆ.
ಯುವತಿಯರಿಗೆ ಮುಟ್ಟಿನ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಜ್ಞಾನವು ಅತ್ಯಂತ ಅವಶ್ಯಕವಾಗಿದೆ. ಇದು ಅವರ ಆರೋಗ್ಯವನ್ನು ಕಾಪಾಡಲು, ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಶಿಕ್ಷಣದಲ್ಲಿ ನಿರಂತರತೆ ಸಾಧಿಸಲು ಸಹಾಯ ಮಾಡುತ್ತದೆ. ಸರಿಯಾದ ಮಾಹಿತಿ ಮತ್ತು ಸಂಪನ್ಮೂಲಗಳ ಮೂಲಕ ಅವರು ತಮ್ಮ ದೇಹವನ್ನು ಗೌರವದಿಂದ ನಿರ್ವಹಿಸಬಹುದು.ಯುವ ಮನಸ್ಸುಗಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಾಡಿನ ಖ್ಯಾತ ವೈದ್ಯರಾದ ಡಾ. ರಕ್ಷಾ ರಾವ್ ಪ್ರಸೂತಿ ತಜ್ಞರು, ಉಷಾ ನರ್ಸಿಂಗ್ ಹೋಮ್ ಶಿವಮೊಗ್ಗ, ಇವರು ಸಂಪನ್ಮೂಲ ವ್ಯಕ್ತಿ ಗಳಾಗಿ ಆಗಮಿಸಿ ಹೆಣ್ಣು ಮಕ್ಕಳ ಆರೋಗ್ಯ ದ ಪ್ರಾಮುಖ್ಯತೆ ಬಗ್ಗೆ ಮಾತನಾಡಿ ಮುಟ್ಟಿನ ನೈರ್ಮಲ್ಯ, ಮುಟ್ಟಿನ ಚಕ್ರ ಮತ್ತು ಅದರ ಪ್ರಕ್ರಿಯೆ, ಮುಟ್ಟಿನ ಸಮಯದಲ್ಲಿ ಉಂಟಾಗುವ ಸಮಸ್ಯೆಗಳು, ಮುಟ್ಟಿನ ಕಿಟ್ ಬ್ಯಾಗ್‌ನಲ್ಲಿ ಇಡಬೇಕಾದ ಅಗತ್ಯ ವಸ್ತುಗಳು, ಆರೋಗ್ಯಕರವಾಗಿ ಮುಟ್ಟಿನ ಚಕ್ರವನ್ನು ನಿರ್ವಹಿಸುವ ವಿಧಾನಗಳು. PCOD ಸಮಸ್ಯೆ, ಗರ್ಭಕಂಠದ ಕ್ಯಾನ್ಸರ್, ದೇಹದ ಬೊಜ್ಜು ಮತ್ತು ಮಹಿಳೆಯರು ತಮ್ಮನ್ನು ತಾವು ಆರೋಗ್ಯವಾಗಿಡಲು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು …ಇತ್ಯಾದಿಗಳನ್ನು ವಿವರಿಸಿದರು. ಇಂದಿನ ಹೆಚ್ಚಿನ ಸಮಸ್ಯೆಗಳ ಮೂಲ ಕಾರಣ ತಪ್ಪು ಜೀವನ ಶೈಲಿ ಹಾಗು ಒತ್ತಡ. ನಾವು ವ್ಯಾಯಾಮ,ಆಹಾರ ಇವುಗಳ ಕುರಿತು ಸರಿಯಾದ ಕ್ರಮ ಅನುಸರಿಸಲೇ ಬೇಕು.ದೈಹಿಕ ಶ್ರಮ ಅಥವಾ ವ್ಯಾಯಾಮ ಬಹಳ ಅಗತ್ಯ. ಹಾಗೆಯೇ ಪೌಷ್ಟಿಕ ಆಹಾರ ಸೇವನೆ ,ಜಂಕ್ ಆಹಾರಗಳಿಂದ ಆದಷ್ಟು ದೂರವಿರುವುದು ,ಸಾಕಷ್ಟು ನೀರು ಕುಡಿಯುವುದು ಹೆಣ್ಣುಮಕ್ಕಳ ಆರೋಗ್ಯಕ್ಕೆ ಅನುಸರಿಸಬೇಕಾದ ತತ್ವಗಳಿ ದ್ದಂತೆ…ಇದರೊಂದಿಗೆ ಧನಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು.ಎನ್ನುತ್ತಾರೆ ಡಾ ರಕ್ಷಾರಾವ್.
ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಡಾ. ಆರ್ ಪಿ ಸಾತ್ವಿಕ್, ಅಧ್ಯಕ್ಷರು FPAI ಇವರು ಮಾತನಾಡಿ ಮಹಿಳೆಯರ ಆರೋಗ್ಯದ ಮಹತ್ವವನ್ನು ಮತ್ತು ಅವರು ತಮ್ಮ ಸಂಸ್ಥೆಯಾದ FPAI ಬಗ್ಗೆ ಮಾತನಾಡಿ,ಸಂಸ್ಥೆಯ ಕಾರ್ಯಗಳನ್ನು ವಿವರಿಸಿದರು.
ವಿಶೇಷ ಉಪನ್ಯಾಸವನ್ನು ಉದ್ದೇಶಿಸಿ ಮಾತನಾಡಿದ ಪ್ರಾoಶುಪಾಲಾರದ ಡಾ. ಸಂಧ್ಯಾ ಕಾವೇರಿಯವರು .
ಸಂಸ್ಥೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಮಹತ್ವದ ಬಗ್ಗೆ ಮಾತನಾಡಿದರು. ಈ ರೀತಿಯ ಕಾರ್ಯಕ್ರಮವು ನಮಗೆ ಜ್ಞಾನ ವನ್ನು ನೀಡುತ್ತದೆ ಮತ್ತು ಅನಾರೋಗ್ಯಕರ ಅಭ್ಯಾಸಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.
ಕಾರ್ಯಕ್ರಮದ ಸಮಯದಲ್ಲಿ ಶ್ರೀ ಸತೀಶ್ ಕಾರ್ಯಕ್ರಮ ಸಂಯೋಜಕರು FPAI ಶಿವಮೊಗ್ಗ,
ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರಾದ ಶ್ರೀಮತಿ ನಾನ್ಸಿ ಲವೀನಾ ಪಿಂಟೋ ಮತ್ತು ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಶ್ಮೀರ ಪಹಲ್ಗಂನಲ್ಲಿ ಭಯೋತ್ಪಾದಕ ದಾಳಿಗೆ ಬಲಿಯಾದ ಭಾರತೀಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕು. ಜ್ಯೋತಿ ಸ್ವಾಗತಿಸಿ, ಕು. ಪೂರ್ಣಿಮಾಶ್ರೀ ವಂದಿಸಿದರು, ಕು. ಮಂಜುಳ ನಿರೂಪಣೆ ಮಾಡಿದರು….